Sailors of the Amazing World (Kannada)

1 month, 2 weeks ago 19
Posted in: Blog

ವಿಸ್ಮಯಲೋಕದ ನಾವಿಕರು

(ಭಯ-ಕೂತುಹಲ-ಹಾಸ್ಯ)

ದಂಡಕಾರಣ್ಯದ ಸುತ್ತ ಚಲಿಸುವ ಹೆಜ್ಜೆಗಳು..

ಸತೀಶ . ನಾಗಠಾಣ 

ಬೆಳಗಿನ ಹೊತ್ತು ತಂಪಾಗಿ ಬೀಸುತ್ತಿರುವ ಗಾಳಿ ಮತ್ತು ದಟ್ಟವಾಗಿ ಕವಿದಿದ್ದ ಮೋಡಗಳು ನೆಲಕ್ಕೆ ತಾಗಿದಂತಾಗಿತ್ತು. ಅದೊಂತರಹ ದಟ್ಟ ಕಾಡು ಕಿಕ್ಕಿರಿದು ತುಂಬಿದ ಬೃಹತ ಮರಗಳ ಸಾಲುಗಳ ಮಧ್ಯದಲ್ಲಿ ಒಂದು ಅಂಕುಡೊಂಕಾದ ಮಣ್ಣಿನ ರಸ್ತೆ ಬಹಳ ದೂರದವರೆಗೆ ಹಾದು ಹೋಗುತ್ತಿತ್ತು. ಗುಡ್ಡಗಾಡುಗಳಿಂದ ಆವರಿಸಿದ ಕಣಿವೆಗಳ ಸುತ್ತ ಚಿಕ್ಕಚಿಕ್ಕ ನೀರಿನ ಜಲಪಾತಗಳನ್ನ ತನ್ನ ಒಡಲೊಳಗೆ ಧುಮ್ಮಿಕ್ಕಿ ಹರಿಯುವ ಇಳಿಜಾರುಗಳಿಂದ ಕೂಡಿದ ಆಳವಾದ ತಗ್ಗು ಪ್ರದೇಶ ಅದಾಗಿತ್ತು.  ಸಮರೋಪಾದಿಯಲ್ಲಿ ಚಲಿಸುವ ಮಣ್ಣಿನ ರಸ್ತೆ ಒಂಥರಹ ವಿಸ್ಮಯಲೋಕದ ಪ್ರಪಂಚಕ್ಕೆ ಮೊದಲಬಾರಿಗೆ ಹೆಜ್ಜೆ ಇಡುತ್ತಿದ್ದೆವೇನು ಅಂತ ಅನ್ನಿಸುತ್ತಿತ್ತು.

ಸಲಿಸಾಗಿ ಒಂದು ಜೀಪು ಮಾತ್ರ ಸಾಗಬಹುದಾದ ಏಕಮುಖ ಸಂಚಾರ ಹೊಂದಿದ ದಾರಿ ಯಾಕೆಂದರೆ ಮತ್ತೊಂದು ಕಡೆಯಿಂದ ಬರುವಂತಹ ದಾರಿ ಯಾವುದು ಇಲ್ಲವಾಗಿತ್ತು. ನಡೆದುಕೊಂಡೆ ಹೋದರೆ ತುಂಬಾ ರೋಮಾಂಚನವಾದ ಗುಡ್ಡ ಗಾಡು ಪ್ರದೇಶ. ದೊಡ್ಡದಾದ ಗುಡ್ಡವನ್ನು ಕೊರೆದು ಮಾಡಿದ ರಸ್ತೆ ಅಷ್ಟೊಂದು ಗಟ್ಟಿ ಇರಲಿಲ್ಲ ಸ್ವಲ್ಪ ಸ್ವಲ್ಪ ಮಣ್ಣು ಅಲ್ಲಲ್ಲಿ  ಜಾರಿ ಬಿಳುತ್ತಿತ್ತು. ಮಳೆ ಏನಾದರೂ ವಕ್ಕರಿಸಿದರೆ ಕಥೆ ಹರೋಹರ , ನಾವು ಅಂದುಕೊಂಡ ಹಾಗೆ ರಸ್ತೆಯ ಮೇಲೆ ಹಾಕಿದ ಮಣ್ಣು ಅಷ್ಟೊಂದು ಗಟ್ಟಿ ಇರಲಿಲ್ಲ. ಅಪ್ಪಿತಪ್ಪಿ ಏನಾದರೂ ಕೆಸರು ತುಂಬಿದ ಮಣ್ಣಲ್ಲಿ ಕಾಲಿಟ್ಟರೆ ಒಂದೆರೆಡು ಮೂರು ಲಗಾಟಿ ಹೊಡೆದು ಬಹಳ ದೂರ ಹೋಗಿ ಜಾರಿ ಬಿಳ್ಳುವಂತಹ ಸ್ಥಳವಾಗಿತ್ತು. ಹೇಗಪ್ಪಾ! ಮಾಡೋದು ಸ್ಥಳದಿಂದ ನಡೆದುಕೊಂಡು ಇವತ್ತು ನಾವು ಹೋಗಲೆಬೇಕು ಇಲ್ಲವಾದಲ್ಲಿ ದಂಡಕಾರಣ್ಯದಲ್ಲಿಯೆ ಉಳಿಯಬೇಕಾದಿತು ಅಂತ ನಾನು ನನ್ನ ಜೊತೆಯಲ್ಲಿರುವ ಸಂಗಡಿಗರಿಗೆ ಹೇಳಿದೆ. ಛೇ! ಎಲ್ಲವನ್ನು ಹೇಳ್ತಾ ಹೇಳ್ತಾ ನನ್ನ ಜೊತೆಯಲ್ಲಿ ಬಂದವರನ್ನ ಪರಿಚಯ ಮಾಡಿಸಲೇ ಇಲ್ಲ ನೋಡಿ. ಕಾಡಿನ ಇಂಚು ಇಂಚುಗಳ ಮಾಹಿತಿ ಗೊತ್ತಿರುವ ಮತ್ತು ಒಳ್ಳೆಯ ಮಾತುಗಾರಿಕೆಯ ವ್ಯಕ್ತಿತ್ವ ಹೊಂದಿದ್ದ ಚಿಕ್ಕ ವಯಸ್ಸಿನ ಅನುಭವಿಯ ವ್ಯಕ್ತಿ ಅಂದರೆ ಅದುವೇ ಆನಂದ. ಕೈಯಲ್ಲಿ  ಒಂದು ಕೋಲು ವಿನಹಃ ನಡಿಗೆ ತುಂಬಾ ಜೋರು ಇಲಾಖೆಯ ಕೆಲಸಕ್ಕೆ ಸೇರಿ ಒಂದು ತಿಂಗಳಾಗಿತ್ತು ಅಷ್ಟೇ. ಇನ್ನೊಬ್ಬರು ನನ್ನ ಸಹದ್ಯೋಗಿ ಕಿರಣ, ಬಹಳ ಚುರುಕು ಬುದ್ದಿ, ಧೈರ್ಯ ಮತ್ತು ಸಾಹಸಿ ಇವರುಗಳ ಜೊತೆಗೂಡಿ ಕೆಲಸದ ನಿಮಿತ್ಯ ತಲಕಾವೇರಿ ವನ್ಯಜೀವಿ ಅಭಯಾರಣ್ಯದ ಸುತ್ತಮುತ್ತಲಿರುವ ಪ್ರದೇಶಗಳಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಾಣಿಗಳ ಜಾಡನ್ನು ಹಿಡಿದು ನಡೆಯುವ ಸರ್ವೇ ಕೆಲಸ ಶುರುವಾಗಿತ್ತು.

ಬಿಸಿಲನಾಡಿನ ಪ್ರದೇಶದಿಂದ ಬಂದಂತಹ ನಮಗೆ ಮಳೆಗಾಳಿತಂಪು ಅಂದರೆ ಗೊತ್ತಿರಲಿಲ್ಲ ನಮಗು   ತಂಪಿಗು ಒಂಥರಹ ವಿರುದ್ದ ಅವಿನಾಭಾವ ಸಂಭಂದ ನೊಡ್ರಿ! ಒಂದೇ ಸಮನೆ ಚಳಿಯಿಂದ ಗಡಗಡ ಅಂತ ನಡುಗ್ತಾ ಇದ್ದೆ ಪಕ್ಕದಲ್ಲಿದ್ದ ಕಿರಣ ನೆಗಡಿಯಿಂದ ಜೋರಾಗಿ ಸೀನಿದರೆ ಈಡಿ ಕಾಡೆ ಜೋರಾಗಿ ಶಬ್ಧ ಮಾಡುತ್ತಿತ್ತು. ಏನಾದರೂ ಹೆಜ್ಜೆ ಗುರುತುಗಳು ಸಿಗಬಹುದು ಎಂದು ನಾನು ಆನಂದ ಸೂಕ್ಷ್ಮವಾಗಿ ಗಮನಿಸುತ್ತಿರುವಾಗ ಪಕ್ಕದಲ್ಲಿದ್ದ ಕಿರಣ ಸಿಡಿಲು ಬಡಿದ ಹಾಗೆ ಹಾಂಕ್ಷಿಂ.. ಹಾಂಕ್ಷಿಂಅಂತ ಸೀನುವಾಗ ಎದೆ ಜಲ್ ಅಂತ ಸದ್ದು ಮಾಡುತ್ತಿತ್ತು.  ಸೂಜಿ ಬಿದ್ದರು ಸಪ್ಪಳಾಗದ ವಾತಾವರಣದಲ್ಲಿ ಮನಸ್ಸುಬುದ್ದಿ ಒಂದೇ ಕಡೆ ಸೀಮಿತವಾಗಿ ಕೆಲಸ ಮಾಡುತ್ತಿರುವಾಗ ತರಹ ಘಟನೆಗಳು ನಡೆದು ಬಿಟ್ಟರಂತು ಅರ್ಧ ಕಥೆ ಮುಗಿದಂಗೆ ಎದೆ ಲಬಕ ಅಂತ ಕಿತ್ತಿಕೊಂಡು ಬಾಯಿಗೆ ಬಂದಂಗಾಗಿ ಉಸಿರೆ ನಿಂತೆ ಹೋಯಿತೆನು ಅಂತ ಗಟ್ಟಿಯಾಗಿ ಎದೆಯ ಮೇಲೆ ಕೈ ಇಟ್ಟಾಗ ಹೃದಯಲಬಡಬ’ ‘ಲಬಡಬಅಂತ ಜೋರಾಗಿ ಬಡಿದುಕೊಳ್ಳುತ್ತಿತ್ತು.  ಒಂದೊಂದು ಸಲ ಕಾಡಿನಲ್ಲಿ ನಡೆಯುವಾಗ ಪಕ್ಕದಲ್ಲಿ ನಮಗೆ ಗೊತ್ತಿರದ ಹಾಗೇ ಜಿಂಕೆ ಅಥವಾ ಕಡವೆ ಜೋರಾಗಿ ಸದ್ದು ಮಾಡಿದಾಗಲು ಸಹ ಎದೆ ಕಿತ್ತುಕೊಂಡು ಬಂದು ಎದೆ ಬಡಿತ ನಿಂತೆ ಹೋಯಿತೆನು ಅಂತ ಅನ್ನಿಸದೆ ಇರಲಾರದು. ರೀ.. ಕಿರಣ ನೀವು ತರಹ ಮಾಡಿದರ ನನ್ನ ಕಾಲುಗಳು ಗಡಗಡ ನಡುಗ್ತಾವ ಯಾಕಂದರ ದಟ್ಟ ಕಾಡು ಬೇರೆ ಯಾವ ಪ್ರಾಣಿ ಯಾವ ಮೂಲ್ಯಾಗ ಇರತದ ಏನೋ?  ಯಾರಿಗೂ ಗೊತ್ತಿಲ್ಲ! ಅಂತಹದರಲ್ಲಿ ಪ್ರದೇಶದ ತುಂಬಾ ಗಜರಾಜನ  ಹಾವಳಿ ಬೇರೆ ಜೋರಾಗಿ ಇದೆ ಅಂತ ನಮ್ಮ ಆನಂದ ಬೇರೆ ಹೇಳುತ್ತಿರುವರು. ನೋಡಿ! ಕಿರಣ, ಒಂದು ವೇಳೆ ನಿಮಗೆನಾದರು ಸೀನು ಬಂತಂದರ ನನಗ ಹೇಳಿ ಏನಾದರೂ ಸೀನು ತಡಿಯೋದಕ್ಕೆ ಕಷಾಯ ಹಾಕುವ ಪ್ಲ್ಯಾನ ಮಾಡುವ ಅಂತ ಹೇಳಿ ಹೊರಟೇವು.

ಕಿರಿದಾದ ಜಾಗದಿಂದ ಕೂಡಿದ ದಾರಿಯ ಅಕ್ಕಪಕ್ಕದಲ್ಲಿ ನಡೆದು ಹೋಗುತ್ತಿದ್ದೆವು.  ನಡೆದು ನಡೆದು ಸುಸ್ತಾದ ಕಾರಣ ಒಂದು  ಐದು ನಿಮಿಷ ಇಲ್ಲೆ ಸ್ವಲ್ಪ ಹೊತ್ತು ಕಾಲ ಕಳೆದು ಮುಂದೆ ಹೋಗೊಣ ಏನಾದರೂ ಸಿಗಬಹುದು ಅಂತ ಅಂದುಕೊಳ್ಳುತ್ತಿರುವಾಗ ಒಂದು ಆಳವಾದ ತಗ್ಗಿರುವ ಜಾಗದಿಂದ ಒಂದು ಶಬ್ಧ ಕೇಳಿಸಲು ಶುರುವಾಯಿತು. ಏನಿರಬಹುದು ಅಂತ ಇಣುಕಿ ಇಣುಕಿ ಗಮನಿಸುತ್ತಿರುವಾಗ ತಗ್ಗು ತುಂಬಿದ ಇಳಿಜಾರಿನ ಪ್ರದೇಶದ ಕೆಳಗೆ ಸಿಕ್ಕಾಪಟ್ಟೆ ಮರಗಳು ಇರುವ ಜಾಗದಿಂದ ಶಬ್ಧ ಬಹಳ ಸೂಕ್ಷ್ಮವಾಗಿ ಕೇಳಿಸುತ್ತಿತ್ತು. ಯಾವುದೋ ಮರ ಅಲುಗಾಡಿದ ಹಾಗೇ ಕಾಣ್ತಾ ಇತ್ತು ಬೆಟ್ಟದ ಮೇಲೆ ಇದ್ದುದ್ದರಿಂದ ಬಚಾವ ಆದವಿ ಲಟಕಪಟಕ ಅಂತ ಶಬ್ದ ಬೇರೆ ಕೇಳುತ್ತಿತ್ತು ಬಹುಶಃ ಇದು ಪಕ್ಕಾ ಗಜರಾಜನ ಎಂಟ್ರಿ ನೋಡ್ರಿ ಅಂದೆ. ಲೇಟಾದರು ಸಹ ಲೇಟೆಸ್ಟ ಆಗಿ ಎಂಟ್ರಿ ಕೊಟ್ಟಿದ್ದ ಗಜರಾಜ ನಮ್ಮ ಅರಿವು ಸಹ ಅದಕ್ಕೆ ಇರಲಿಲ್ಲ ನಾವು ಒಂದು ತೀರ ಇದ್ದರೆ ಗಜರಾಜ ಇನ್ನೊಂದು ತೀರದ ಕಡೆ ಮೇಯುತ್ತಿರುವಾಗ ಜೋರಾಗಿ ಕಿರುಚಿಯೆ ಬಿಟ್ಟಿತ್ತು. ಗಜರಾಜನ ಕಿರುಚುವಿಕೆಯು ದಟ್ಟ ಕಾಡುಗಳ ಮಧ್ಯದಿಂದ ಜೋರಾಗಿ ಪ್ರತಿಧ್ವನಿಯಾಗಿ ಕೇಳಿಸಲಾರಂಭಿಸಿತು. ಮನಸ್ಸಿನ ಉದ್ವೇಗ ಒಂದು ಕಡೆ ಆದರೆ, ಇನ್ನೊಂದು ಕಡೆ ಗಜರಾಜನ ಇರುವಿಕೆಯಿಂದ ಬಹಳ ದೂರವಿರುವ ನಾವುಗಳು ಕೊಂಚ ರಿಲ್ಯಾಕ್ಸ ಮೂಡನಲ್ಲಿ ಇದ್ದೇವು. ಅಬ್ಬಾ! ಮೈ ಕೊರೆಯುವಂತಹ ಚಳಿ ಇದ್ದರು ಸಹ  ಹಣೆಯ ಮೇಲಿರುವ ಬೆವರು ಹನಿ ಹನಿಯಾಗಿ ಬಿಳ್ಳುತ್ತಿತ್ತು.

ಕೆಸರು ತುಂಬಿದ ಮಣ್ಣಿನ ರಸ್ತೆ ಮೇಲೆ ಸಿಕ್ಕ ಅಪರೂಪದ ಹೆಜ್ಜೆ ಗುರುತುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ದೃಶ್ಯ ಮತ್ತು ಇನ್ನೊಂದು ತೀರದಲ್ಲಿ ಒಂಟಿಯಾಗಿ ಮೇಯುತ್ತಿರುವ ಆನೆಯ ಪಟ. ಚಿತ್ರ ರಚಿಸಿದರು- ಕೃಷ್ಣಾ ಸಾತಪೂರ

ತುಂತುರು ಮಳೆ ಬರುವ ಎಲ್ಲಾ ಲಕ್ಷಣಗಳು ಇದ್ದರು ಸಹ ಅವತ್ತು ಮಳೆ ಬರಲಿಲ್ಲ. ಬೆಟ್ಟದ ಕೆಳಗಿರುವ ಗಜರಾಜನ ಹಿಂಬದಿ ಮಾತ್ರ ಕಾಣುತ್ತಿತ್ತು. ಅಜಾನುಬಾಹು ಹೊಂದಿದ ಅದರ ದೇಹ ನೋಡಲು ಬಲು ಸುಂದರ, ಉದ್ದನೆಯ ಕೋರೆ ಹಲ್ಲುಗಳು, ಸೊಂಡಿಲು ಅಮೋಘ ಅಂತ ಅನ್ನುತಿರಲು ಪಕ್ಕದಲ್ಲಿದ್ದ ಆನಂದ ಬಹುಶಃ ಒಂಟಿ ಸಲಗ ಇರಬಹುದು ಅದಕ್ಕೆ ಪಾಟಿ ಪುಸುಗುಟ್ಟುತ್ತಿದೆ ನೋಡಿ ಸರ್ ಅಂತ ಅತ್ತಂದಿತ್ತ ಓಡಾಡಿ ನೋಡಿ ಹೇಳಿದ. ಮೊನ್ನೆ ಮೊನ್ನೆ ಇದೆ ದಾರಿಯ್ಯಾಗೆ ಸ್ವಲ್ಪ ದೂರ ಹೋದರೆ ಒಂದು ಕಾಫಿ ಎಸ್ಟೇಟ್ ಬರುತ್ತೆ ಅಲ್ಲಿ ಇದೆ ತರಹದ ಒಂದು ಒಂಟಿ ಸಲಗ ಒಬ್ಬನನ್ನು  ಬೆನ್ನು ಬಿಡದೆ ಅಟ್ಟಾಡಿಸಿ ಓಡಿಸಿದ್ದರಿಂದ ಆತ ಹೇಗೋ‌ ಅಪಾಯದಿಂದ ಉಪಾಯವಾಡಿ ಎದ್ನೊಬಿದ್ನೊ ಅಂತ ಅಲ್ಲಿಂದ ಪಾರಾಗಿದ್ದಾನೆ ಸರ್ ಅಂದ. ಹೌದಾ! ಕಾಡಲ್ಲಿ ಕಾಫಿ ಎಸ್ಟೇಟ್ ಗಳಾ? ಎಸ್ಟೇಟಗಳು ಇಲ್ಲಿ ಇರಲು ಹೇಗೆ ಸಾಧ್ಯ ಆನಂದ ಅಂತ ಕೇಳಿದೆ. ಪ್ರದೇಶದಲ್ಲಿ ಬಹಳ ಹಳೆ ಕಾಲದ ಎಸ್ಟೇಟಗಳು ಇವೆ ಆದರೆ, ಇಲ್ಲಿರುವ ಎಸ್ಟೇಟಗಳನ್ನ ಈಗ ಯಾರು ನೋಡಿಕೊಳ್ಳುತ್ತಿಲ್ಲ ಹೊರತು ಆಗಾಗ ಜನರ ಓಡಾಟ ಇರುವುದರಿಂದ ತರಹದ ಘಟನೆಗಳು ನಡೆಯುತ್ತಿರುತ್ತವೆ ಇವೆಲ್ಲಾ ಭಾಗದಲ್ಲಿ ಮಾಮುಲಿ ಬಿಡಿ ನಡಿರಿ.. ನಡಿರಿ.. ಸರ್ ಅಂತ ಹೇಳುತ್ತಿರುವಾಗಆಸಮಾನಸೆ ಗಿರಾ.. ಸಿದಾ ಜಾಕರ ಖಜುರ ಮೆ ಅಟಕಾ.. ಅನ್ನೋ ಯುಕ್ತಿ ನನ್ನ ತಲೆಯಲ್ಲಿಬುಲೆಟ್ ಟ್ರೇನತರಹ ಸಂಶಯಾಸ್ಪದ ಅನುಮಾನದ ಸುಳಿ ಹುಟ್ಟಿಹಾಕಿದಂತು ಸುಳ್ಳಲ್ಲ. ಸರ್  ನಾವೆನಾದರು ಆನೆ ಕೈಯಾಗೆ  ಸಿಕ್ಕ ಬುಟ್ಟರೆ  ಬುಗರಿ.. ಬುಗರಿ.. ಆಡಿಸಿದಂಗೆ ಆಟ ಆಡಿಸ ಬಿಡುತೈತೆ ಸ್ವಲ್ಪ ಮೈಯೆಲ್ಲಾ ಕಣ್ಣಾಗಿರಿ ಹುಷಾರು ಅಂತ ಅಂದರು ಆನಂದ. ಅದೆನೋ ಅಂತಾರಲ್ಲರಿ ಕಿರಣ ನಮ್ಮ ಕಡೆಮಜಾಕ ಮಜಾಕ ಮೇ ರಜಾಕ ಮರಗಯಾ! ಅಂತ ಹಂಗಾಗಬಾರದು ನೋಡ್ರಿ ನಮ್ಮ ಕಥೆನು, ಸ್ವಲ್ಪ ನೀವು ಮ್ಯಾಲೆ ಕೆಳಗೆ ನೋಡಕೊಂತ ನಡಿರಿ ಅನ್ನುತಿರಲು ಬನ್ನಿ..ಬನ್ನಿ..ಸರ್ ಬೇಗ ಬೇಗ ಹೋಗೊಣ ಇಲ್ಲೆ ಎಲ್ಲೋ ಮೇಯುತ್ತ ನಿಂತಿರುತ್ತವೆ ಆನೆಗಳು, ಮೊದ್ಲೆ ದಾರ್ಯಾಗೆ ಬಿದಿರುಗಳು ಬಹಳಷ್ಟಿವೆ ಆದಷ್ಟು ಇಲ್ಲಿಂದ ನಾವು ಪಾರಾಗಬೇಕು ಅಂತ ಪುಸುಗುಟ್ಟುತ್ತ ನಡೆಯಲು ಶುರುಮಾಡಿದ.

ಆನಂದ ಹೇಳುತ್ತಿರೋದು ನಿಜಾ? ಆದರೂ ಆಗಿರಬಹುದುಅಂತ ಮನಸ್ಸಿನಲ್ಲಿ ಅಂದುಕೊಳ್ಳುತ್ತ ಹೋಗುತ್ತಿರಬೇಕಾದರೆ ಕೆಲವು ಹೆಜ್ಜೆ ಗುರುತುಗಳು ಕೆಸರು ತುಂಬಿದ ಮಣ್ಣಿನಲ್ಲಿ ನಮಗೆ ಕಂಡವು. ಹೆಜ್ಜೆ ಗುರುತುಗಳನ್ನ ನೋಡುತ್ತಿದ್ದರೆ ಯಾವುದೋ ಮೌಂಸಾಹಾರಿ ಪ್ರಾಣಿ ಇಲ್ಲಿಂದ ಹಾದು ಹೊದಂಗಾಗಿದೆ ಸ್ವಲ್ಪದರಲ್ಲೆ  ಜಸ್ಟ ಮಿಸ್ (ಹತಾಶೆಯಿಂದ ಆನಂದ ಸ್ವಲ್ಪ ಮುಖವನ್ನು  ಗಂಟಾಗಿಸಿಕೊಂಡು) ಇಲ್ಲಾಂದರೆ ಇವತ್ತು ನಮ್ಮ ಕಣ್ಣಿಗೆ ಕಾಣುತ್ತಿದ್ದವು ನೋಡಿ. ಪಕ್ಕದಲ್ಲಿದ್ದ ಕಿರಣ ತನ್ನ ಅಗಲವಾದ ಕನ್ನಡಕವನ್ನು ತೆಗೆದು ಬಟ್ಟೆಯಿಂದ ಸರಿಯಾಗಿ ಒರೆಯಿಸಿ ಕಣ್ಣಿನ ಮೇಲೆ ಮತ್ತೊಂದು ದಪ್ಪು ಗಾಜಿನ ಕನ್ನಡಕವನ್ನ ಹಾಕಿ ಅದರಿಂದ ಕಿಕ್ಕರಿಸಿ ನೋಡುತಿರಲು ಇದು ಕೆನ್ನಾಯಿಯ ಹೆಜ್ಜೆಗಳು ಇದ್ದರು ಇರಬಹುದು. ಆದರೆ, ಕೆಸರಿನಲ್ಲಿ ಇನ್ನು ಹಲವು ಪ್ರಾಣಿಗಳು ಓಡಾಡಿವೆ ಎನ್ನುತಿರಲು ನನ್ನ ಹಿಂಬದಿಯ ಕಾಲಿನಲ್ಲಿ ನಾನು ಬಗ್ಗಿ ನೋಡುತಿರಲು ಚಿರತೆಯ ಹೆಜ್ಜೆಗಳು ಕಾಣಿಸಿಕೊಂಡವು . ಅಬ್ಬಾ! ಇಲ್ಲಿ ನೋಡಿ! ನೋಡಿ! ಎಷ್ಟ ಚಂದದ ನೋಡ್ರಿ! ಹೊಡಿ ಒಂಭತ್ತ ಸಿಕ್ಕೆ ಬಿಟ್ಟಿತ್ತು ಅಂತ ರೆಕಾರ್ಡ ಹಾಳೆಯಲ್ಲಿ ನಮೂದಿಸಿಕೊಂಡೆವು. ನೋಡ ನೋಡುತ್ತ ಕಡವೆ, ಜಿಂಕೆ, ಕಾಡು ಕುರಿಕಾಡು ಎಮ್ಮೆ (ಕಾಟಿ) ರಾಶಿ ರಾಶಿ ಹೆಜ್ಜೆಗಳನ್ನ ಹುಡುಕಿ ಹುಡುಕಿ ಪತ್ತೆ ಹಚ್ಚುವ ಕೆಲಸ ಒಂಥರಹ ಮಜಾ ಕೊಡುತ್ತಿತ್ತು.

ಅಷ್ಟರಲ್ಲಿ ನಾವು ಕ್ರಮಿಸಬೇಕಾದ ದಾರಿ ಕೊನೆಯ ಘಟ್ಟದಲ್ಲಿರಲು  ನೋಡ ನೋಡುತ್ತ ಬೆಳಕು‌ ಕತ್ತಲೆಯ ರೂಪ ತಾಳುವುದರೊಳಗೆ ನಾವು ಇಲ್ಲಿಂದ ಬೇಗ ಬೇಗ ನಡೆದು ಮುಂದೆ ಸಾಗಬೇಕು. ಹೇಗಾದರೂ ಮಾಡಿ ಇವತ್ತು ನಮ್ಮ ಗುರಿಯನ್ನ ತಲುಪಲೆ ಬೇಕು ಅಂತ ಹೇಳಿ ಕಾಡಿನ ದಾರಿಯತ್ತ ಮುಖ ಮಾಡಿ ಹೊರಡಲು ಸಿದ್ಧರಾದೆವು.

ಮುಂದುವರೆಯುವುದು..

19 Responses

 1. ಯಲ್ಲನಗೌಡ ಬಿರಾದಾರ says:

  ಅದ್ಬುತ ಬರವಣಿಗೆ ಸರ್ ಕತೆಯೊಳಗೆ ಮುಳುಗಿದರೆ ನಿಮ್ಮ ಜೋತೆಗೆ ನಡೆದು ಬಂದ ಭಾವ, ಕತೆಯಲ್ಲಿ ತಿಳಿಸಿರುವ ಸನ್ನಿವೇಶಗಳು ಆಸಕ್ತಿ ಹೆಚ್ಚಿಸುತ್ತವೆ ಅಲ್ಲಲ್ಲಿ ಬಳಸಿದ ಉತ್ತರ ಕರ್ನಾಟಕ ಪದಗಳು – ನಾವು ಕೂಡಾ ಕರ್ನಾಟಕದ ಉತ್ತರ ಭಾಗದವರಾದ್ದರಿಂದ ಭಾಳ ಇಸ್ಟ ಆತ್ರಿ ಕತಿ , ಕತೆಯ ಮುಂದಿನ ಭಾಗದ ನಿರೀಕ್ಷೆಯಲ್ಲಿ ಇಂತಿ ಒದುಗ…..

 2. Dr. Savita says:

  The title of the story is very impressive. Narrated very well. While reading the story felt that I was also in a forest. Looking forward for your next story. All the best.

 3. Girish Inamadar says:

  ಅಂಕಣದ ಶೀಷಿ೯ಕೆ ,ಸಾಹಸಗಾಥೆಯ ಕೂತೂಹಲದ ಮುನ್ನುಡಿ ಯಂತಿದೆ.ಹಿಂದಿನ ಅಂಕಣವು ನಮಗೆ ಕಥೆಯ ಮೇಲೆ ಸಾಕಷ್ಟು ನಿರೀಕ್ಷೆ ಉಂಟು ಮಾಡಿದೆ.ಆದರೆ ಇದು ನೈಜ ಅನುಭವ.ಆದ್ದರಿಂದ ಜೀವವನ್ನು ಒತ್ತೆ ಇಟ್ಟು ಬರೆಯುವ ಇಂಥ ಘಟನೆಗಳು, ಇತರ ಸಂಶೋಧಕ ಲೇಖಕರಿಗೆ ಪ್ರೇರಣೆಯಾಗಲಿ.ಶುಭವಾಗಲಿ

 4. SURANJITA ROY says:

  Can I get the English version, please?

 5. Harsha L says:

  Nice story and also the illustration Satish, I’m also aware of your original style of story telling which I like the most which I miss here.
  Ex: Satish: ಆನಂದ ಆನೆ ಅಂತ ಹೇಳಿದ ಅಷ್ಟೇ sir ನನ್ನೆದೆ ಜಲ್ ಎಂದಿತ್ತು!
  All the best to impress people like me.👏

 6. Ullas says:

  ತುಂಬಾ ಚೆನ್ನಾಗಿ ಬರವಣಿಗೆ ಬಂದಿದೆ.
  ಶುಭವಾಗಲಿ …
  ಇನ್ನೂ ಹೆಚ್ಚು ಹೆಚ್ಚು ಬರೆಯುವಂತವರಾಗಿ.

 7. “ವಿಸ್ಮಯ ಲೋಕದ ನಾವಿಕರು” ಸುಂದರ ಅನುಭವ ದ ಲೇಖನಿ ಮನಸಿಗೆ
  ತುಂಬಾ ಖುಷಿ ನೀಡುವಂತಿದೆ. ಪ್ರಕೃತಿ ನಿಯಮ ಕ್ಕೆ ಪ್ರಕೃತಿ ಸರಿಸಾಟಿ ,,,, ಎನುವಂತಿದೆ, sir

 8. Shiva says:

  Very nice one Satish !!! Keep writing such stories 👍👍

 9. SANDEEP DESHAPNADE says:

  nice article Satish. Very gud job.

 10. Rajesh.ck says:

  ಪ್ರಕೃತಿ ಸೌಂದರ್ಯವನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದಿರಿ. ನಿಮ್ಮ article ಓದಿದ ನಂತರ ನನಗೂ ಇಂತಹ ವಿಸ್ಮಯ ಜಾಗವನ್ನು ನೋಡುವ ಹಂಬಲ ಹೆಚ್ಚಾಗಿದೆ. ಧನ್ಯವಾದಗಳು☺️🤗.

 11. Shivakumar says:

  Super brother

 12. ASHOK JAMAKHANDI says:

  ನಿಮ್ಮ ಬರವಣಿಗೆ ಓದುತ್ತ ನನಗೂ ಕಾಡಿನಲ್ಲಿ ನಿಮ್ಮ ಜೊತೆಯಲ್ಲಿ ಇರುವ ತರಹದ ಅನುಭವ ಆಯಿತು. ಹೀಗೆ ನಿಮ್ಮ ಬರವಣಿಗೆ ಮುಂದೆ ಸಾಗಲಿ ಎಂದು ಹಾರೈಸುವ ನಿನ್ನ ಗೆಳೆಯ
  ಅಶೋಕ ಜಮಖಂಡಿ.

 13. Appu jadhav says:

  ನಮಸ್ಕಾರಗಳು ಸರ್

  ತಮ್ಮ ಬರವಣಿಗೆ ಶೈಲಿ ತುಂಬಾ ತುಂಬಾ ಸುಂದರವಾಗಿದೆ ಸರ್ ಓದುತ್ತಾ ಓದುತ್ತಾ ಅದರಲ್ಲೇ ಮುಳುಗಬಿಟ್ಟೆ ಸರ್ ನನ್ನ ಕಣ್ಣ ಮುಂದೆ ಎಲ್ಲ ಚಿತ್ರ ಗಳು ಬಂದು ಹೋದವು ಸರ್ ನನಗೆ ಸಂತೋಷ್ ಏನ್ ಅಂದ್ರೆ ಪ್ರತಿ ಒಂದು ಲೇಖನದ ಲಿಂಕ ತಪ್ಪದೆ ಕಳಸತ್ತಿರಲ್ಲ ಅದೇ ಖುಷಿ ಸರ್ ನನಗೆ. ಮತ್ತೆ ನಿಮ್ಮಿಂದ ಹಲವಾರು ಲೇಖನಗಳು ಹಾಗೂ ಪುಸ್ತಕಗಳು ತಮ್ಮಿಂದ ಹೊರಬರಲಿ ಅಂತ ಹಾರೈಸುತ್ತೇನೆ. ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಲೇಖಕರು ಆಗಬೇಕು ಸರ್ ತಾವುಗಳು.

 14. Krishna Satapur says:

  ‘ವಿಸ್ಮಯಲೋಕದ ನಾವಿಕರು’ ಎಂಬ ರಸಾನುಭವವುಳ್ಳ ಲೇಖನ ತನ್ನ ಶಿರ್ಷಿಕೆಯಿಂದ ಓದುಗರನ್ನು ಆಕರ್ಷಿಸುತ್ತದೆ.ಅದರಲ್ಲಿನ ವಿಸ್ಮಯ ಸಂಗತಿಗಳನ್ನು ತಿಳಿಯಲು ಕುತೂಹಲ ಉಂಟು ಮಾಡುತ್ತದೆ.ಈ ವಿಸ್ಮಯಲೋಕವು ಹೇಗಿದೆ? ಅದರಲ್ಲಿ ಏನು ಅಡಗಿದೆ? ಅಲ್ಲಿನ ನಾವಿಕರು ಯಾರು? ಏನು ಮಾಡುತ್ತಾರೆ? ಎಂಬ ಪ್ರಶ್ನೆಗಳ ಮಳೆಯೇ ಸುರಿಯುತ್ತದೆ.ಅದನ್ನು ಅರಿಯಲು ಲೇಖನ ಓದುವುದೊಂದೇ ಸೂಕ್ತ ಪರಿಹಾರ.ಇಲ್ಲಿ ಆಗಾಗ ಭಯದ ವಾತಾವರಣ ಹಾದು ಹೊಗುತ್ತದೆ.ಕೆಲವೊಂದು ಸಂದರ್ಭದಲ್ಲಿ ಚೇಷ್ಟೆ,ವಿನೋದ ಮೊಳಗುತ್ತದೆ.ಮುಂದೆ ಸಾಗಿದಂತೆ ಕುತೂಹಲದ ಬುತ್ತಿಯನ್ನು ಬಿಚ್ಚಿಡುವ ಪ್ರಯತ್ನ ಸತೀಶ ಸರ್ ರವರು ತುಂಬಾ ಸೊಗಸಾಗಿ ಬರವಣಿಗೆಯ ಮೂಲಕ ನಿಭಾಯಿಸಿದ್ದಾರೆ.ಓದುತ್ತಾ ಸಾಗಿದಂತೆ ಒಂದೆಡೆ ಸತೀಶ ಸರ್ ರವರೇ ಖುದ್ದಾಗಿ ತಮ್ಮ ಅನುಭವವನ್ನು ನನ್ನೊಂದಿಗೆ ಪ್ರತ್ಯಕ್ಷವಾಗಿ ಹಂಚಿಕೊಳ್ಳುತ್ತಿದ್ದಾರೆಂದು ಭಾಸವಾಯಿತು.ಇದು ಅವರ ಲೇಖನದ ಶಕ್ತಿ ಎತ್ತಿ ತೊರುತ್ತದೆ.ಈ ಲೇಖನದಲ್ಲಿ ಮೂಡಿ ಬಂದ ಆಸಮಾನಸೇ ಗಿರಾ…..,ಮಜಾಕ ರಜಾನ ಎನ್ನುವ ಹಿಂದಿ ಹಾಸ್ಯಾಸ್ಪದ ಸಾಲುಗಳು ಲೇಖನಕ್ಕೆ ಹೊಸ ಮೆರುಗನ್ನು ತಂದಿದೆ.ಒಂಟಿಯಾಗಿ ಗಿಡದ ಪೊದೆಯಲ್ಲಿ ಮೇಯುತ್ತಿರುವ ಆನೆಯನ್ನು ‘ಒಂಟಿ ಸಲಗ ತಿಂದು ಕೊಬ್ಬಿದೆ’ ಎಂದು ವ್ಯಂಗ್ಯ ಮಾಡಿದ್ದು ನಿಜಕ್ಕೂ ಅದ್ಭುತ.ಹೀಗೆ ಅನೇಕ ಸಂಗತಿಗಳೊಂದಿಗೆ ದಂಡಾಕಾರಣ್ಯದ ಪಕ್ಷಿನೋಟ,ಪರಿಸರ ತುಂಬಾ ಸುಂದರವಾಗಿ ಮೂಡಿ ಬಂದಿದೆ.
  ಇಂತಹ ಸುಂದರ,ರಸದೌತಣ ಬರಹಕ್ಕೆ ಚಿತ್ರ ಬಿಡಿಸಲು ಅವಕಾಶ ಕಲ್ಪಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಸರ್.ಇದರ ಮುಂದಿನ ಭಾಗ ಆದಷ್ಟು ಬೇಗನೆ ಮೂಡಿ ಬರಲಿ ಎಂಬ ಆಶಾಭಾವದೊಂದಿಗೆ………..

 15. Nishanth says:

  Good one Satish! Also a well Illustrated picture

 16. Mohana says:

  Thumba chenagi bardidira

 17. Jyoti Udapudi says:

  Really very good writing, felt like I am also part of this journey, really enjoyed reading , thank you so much Sathish

 18. ವಿಶ್ವೇಶ್ವರಯ್ಯ says:

  ಸೂಪ್ಪರ್ ಒಳ್ಳೆಯ ಬರವಣಿಗೆ ಮತ್ತೆ ಓಳ್ಳೆಯ ಮನೋಭಾವ ತುಂಬಿರುವಂತದ್ದು ,ಶುಭವಾಗಲಿ ನಿಮಗೆ

 19. Dr Vishwanath Patil says:

  The narration of this article very impressive and it feels me that I am also a part of this journey..
  Thank you Satish for wonderful article.. All the best

Leave a Reply

Your email address will not be published. Required fields are marked *

WE STAND FOR WILDLIFE